ಪ್ಲಾಸ್ಟಿಕ್ ಉತ್ಪನ್ನ ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ದಾಳಿ: ಮಾನ್ಯ ಶಾಸಕರ ನೇತೃತ್ವBBMP is all set to strictly enforce the ban on plastic items from Monday

22 Views No Comment

ಪ್ಲಾಸ್ಟಿಕ್ ಉತ್ಪನ್ನ ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ದಾಳಿ: ಮಾನ್ಯ ಶಾಸಕರ ನೇತೃತ್ವ

ಬಿಬಿಎಂಪಿ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಮಳಿಗೆಗಳ ಮೇಲೆ ಬಿಬಿಎಂಪಿ ಆರೋಗ್ಯಾಧೀಕಾರಿಗಳು ಬುಧವಾರುವೂ ದಿಢೀರ್ ದಾಳಿ ನಡೆಸಿ ೬೭೯ ಕೆ.ಜಿ ಪ್ಲಾಸ್ಟಿಕ್ ವಶಪಡಿಸಕೊಳ್ಳುವ ಜೊತೆಗೆ ೩ ಲಕ್ಷ ರೂ. ದಂಡ ವಿಧಿಸಿದ್ದಾರೆ.

ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಸಂಪೂರ್ಣ ನಿಷೇಧ ಮಾಡುವ ಉದ್ದೇಶದಿಂದ ಪೂಜ್ಯ ಮಹಾಪೌರರು ಜು.೧೫ ರಂದು ಬಿಬಿಎಂಪ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧೀಸುವ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ. ಅದರಂತೆ ಪಾಲಿಕೆ ಆರೋಗ್ಯಾಧಿಕಾರಿಗಳು ಪಾಲಿಕೆ ಎಂಟು ವಲಯಗಳ ವಾರ್ಡ್ಗಳಲ್ಲಿರುವ ಸಗಟು ಮಳಿಗೆಗಳು, ಅಂಗಡಿಗಳಿಗೆ ದಿಢೀರ್ ದಾಳಿ ನಡೆಸಿ ಪ್ಲಾಸ್ಟಿಕ್ ಉತ್ಪನ್ನಗಳು ಕಂಡುಬರುವ ಮಳಿಗೆಗಳಿಗೆ ನೋಟೀಸ್ ಜಾರಿಮಾಡುತ್ತಿದ್ದಾರೆ. ಅಲ್ಲದೆ ದಂಡ ಕೂಡಾ ವಿಧಿಸಿ, ಇನ್ನುಮುಂದೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದೇರೀತಿ ಅನಿರೀಕ್ಷಿತವಾಗಿ ದಾಳಿ ನಡೆಸುತ್ತಲೇ ಇರುತ್ತೇವೆ. ಏನಾದರು ಮತ್ತೆ ಪ್ಲಾಸ್ಟಿಕ್ ಬಳಕೆ ಕಂಡುಬಂದಲ್ಲಿ ನಿಮ್ಮ ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ಕೂಡಾ ನೀಡಿದ್ದಾರೆ.

ಬೀದಿಬದಿ ವ್ಯಾಪಾರ ಮಾಡುತ್ತಿರುವ ವ್ಯಾಪಸ್ಥರಿಗೆ ಇನ್ನುಮುಂದೆ ಪ್ಲಾಸ್ಟಿಕ್ ಕವರ್‌ಗಳು ಬಳಕೆ ಮಾಡುವಂತಿಲ್ಲ. ಏನಾದರು ಬಳಕೆ ಮಾಡಿದರೆ ನಿಮ್ಮ ಅಂಗಡಿಗಳನ್ನು ತೆರವುಗೊಳಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಪಾಲಿಕೆಯಿಂದ ಪೇಪರ್ ಬ್ಯಾಗ್ ನೀಡುತ್ತೇವೆ. ಇಲ್ಲವೇ ಬಟ್ಟ ಬ್ಯಾಗ್‌ನ್ನು ಬಳಸುವಂತೆ ತಾಕೀತು ಮಾಡಿದ್ದಾರೆ.

ಎಲ್ಲೆಲ್ಲಿ ದಾಳಿ ನಡೆಸಲಾಗಿದೆ:
ಬುಧವಾರ ಪ್ಲಾಸ್ಟಿಕ್ ಆಂದೋಲನ ಕಾರ್ಯಾಚರಣೆ ಮುಂದುವರಿಸಿದ್ದು, ದಕ್ಷಿಣ ವಲಯದಲ್ಲಿ ವಿಜಯನಗರ, ಹನುಂತನಗರ, ಬನಶಂಕರಿ, ಬಿಟಿಎಂ ಲೇಔಟ್, ಸಾರಕ್ಕಿ ಮಾರುಕಟ್ಟೆ, ಗಾಂಧಿ ಬಜಾರ್ ಸೇರಿದಂತೆ ಹಲವೆಡೆ ದಾಳಿ ನಡೆಸಲಾಗಿದೆ. ಬೊಮ್ಮನಹಳ್ಳಿ ವಲಯದ ದೇವರಚಿಕ್ಕನಹಳ್ಳಿ, ಜಂಬೂಸವಾರಿ ದಿಣ್ಣೆ, ನಟರಾಜ ಬಡಾವಣೆ, ಸುಬ್ರಮಣ್ಯಪುರ ಮುಖ್ಯ ರಸ್ತೆ, ಅಂಜನಾಪುರ ಸೇರಿದಂತೆ ವಿವಿಧೆಡೆ ದಾಳಿ ನಡೆಸಲಾಗಿದೆ. ಮಹದೇವಪುರ ವಲಯದ ಕೆ.ಆರ್.ಪುರಂ, ಎಚ್‌ಎಎಲ್, ಕುಂದಲಹಳ್ಳಿ ಮುಖ್ಯರಸ್ತೆ, ಬೆಳ್ಳಂದೂರು ಹೊರಮಾವು ಹಾಗೂ ದೇವಸಂದ್ರದಲ್ಲಿ ದಿಢೀರ್ ದಾಳಿ ನಡೆಸಲಾಗಿದೆ. ಯಲಹಂಕ ವಲಯದ ಅಮೃತನಗರ, ದೊಡ್ಡಬೊಮ್ಮಸಂದ್ರ, ಪುಟ್ಟೇನಹಳ್ಳಿ, ಕೆಂಪಾಪುರ, ಕಣ್ಣೂರು ಸೇರಿದಂತೆ ಹಲವೆಡೆ ದಾಳಿ ನಡೆಸಲಾಗಿದೆ. ಅದೇರೀತಿ ಪಶ್ಚಿಮ, ಪೂರ್ವ, ರಾಜರಾಜೇಶ್ವರಿ ನಗರ, ದಾಸರಹಳ್ಳಿ ವಲಯಗಳಲ್ಲಿ ಆರೋಗ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ.

೬೯೭ ಕೆ.ಜಿ ಪ್ಲಾಸ್ಟಿಕ್ ವಶ:
ಬುಧವಾರ ಬಿಬಿಎಂಪಿ ಎಂಟು ವಲಯಗಳಲ್ಲಿ ದಾಳಿ ನಡೆಸಿ ೧,೧೭೧ ಅಂಗಡಿಗಳು ಹಾಗೂ ೮೨೧ ಬೀದಿಬದಿ ಅಂಗಡಿಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ೧೯೯ ನೋಟೀಸ್ ಜಾರಿ ಗೊಳಿಸಲಾಗಿದೆ. ೬೯೭ ಕೆ.ಜಿ ಪ್ಲಾಸ್ಟಿಕ್ ಜಪ್ತಿ ಮಾಡಿ ೩,೦೧,೪೩೦ ದಂಢ ವಿಧಿಸಲಾಗಿದೆ.

ಆಂದೋಲನದಲ್ಲಿ ಮಾನ್ಯ ಶಾಸಕರು ಭಾಗಿ:
ಜಯನಗರದ ಮಾನ್ಯ ಶಾಸಕಿ ಶ್ರೀಮತಿ ಸೌಮ್ಯಾ ರೆಡ್ಡಿ ರವರು ಬುಧವಾರ ಆರೋಗ್ಯಾಧಿಕಾರಿಗಳ ಜೊತೆ ಜಯನಗರ ೮ನೇ ಬ್ಲಾಕ್‌ನಲ್ಲಿರುವ ವಾಸುದೇವ್ ಅಡಿಗಾಸ್ ಹೋಟೆಲ್‌ಗೆ ದಿಢೀರ್ ಭೆಟಿ ನೀಡಿ ೧೦೦ ಕೆ.ಜಿ.ಗೂ ಹೆಚ್ಚು ಪ್ಲಾಸ್ಟಿಕ್‌ನ್ನು ಜಪ್ತಿ ಮಾಡಿ ೫೦ ಸಾವಿರ ರೂ. ದಂಡ ವಿಧಿಸಿ ಹೋಟೆಲ್ ಉದ್ದಿಮೆ ಮುಚ್ಚಲು ನೋಟೀಸ್ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಬಳಿಕ ಜಯನಗರ ಹಾಗೂ ಬನಶಂಕರಿ ದೇವಸ್ಥಾನದ ಸುತ್ತಮುತ್ತಲಿನ ಸ್ಥಳಗಳಿಗೆ ಅಧಿಕಾರಿಗಳ ಜೊತೆ ಹೋಗಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಜಾಗೃತಿ ಮೂಡಿಸಿದರು

About the author

Leave a Reply

Your email address will not be published. Required fields are marked (required)